Battis Raagagalu

service

ಪುರಂದರ ದಾಸರು ಸರ್ವಕಾಲಕ್ಕೂ ಪ್ರಸಿದ್ಧ ಸಾಹಿತ್ಯ ರಚನೆಕಾರರು ಮತ್ತು ಸಂಗೀತಗಾರರು. ಅವರನ್ನು’ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯುತ್ತಾರೆ. ಪುರಂದರ ದಾಸರು ತಮ್ಮ ರಚನೆಗಳಲ್ಲಿ ಬತ್ತೀಸ್ ರಾಗಗಳನ್ನು ಉಪಯೋಗಿಸಿದ್ದಾರೆ ಎಂದು ಸಂಶೋಧಕರು ತಿಳಿಯಪಡಿಸುತ್ತಾರೆ. ಈ ಕೆಳಗಿನ ಕೆಲವು ರಚನೆಗಳಿಂದ ಆ ಬತ್ತೀಸ್ ರಾಗಗಳನ್ನು ಅವರು ಹುಡುಕಿದ್ದಾರೆ:

  • ತುತ್ತುರು ತೂರೆಂದು ಬತ್ತೀಸರಾಗಗಳನ್ನು ಚಿತ್ತಜ ಜನಕ…..
  • ನಳಿನಜಾಂಡ ತಲೆಯ ತೂಗಿ…..
  • ಅಂಗನೆಯರೆಲ್ಲರು ನೆರೆದು…..
  • ರಂಗ ಕೊಳಲಲೂದಲಾಗಿ…..

ಆ ಬತ್ತೀಸ್ ರಾಗಗಳನ್ನು ಈ ಕೆಳಗೆ ಕೊಡಲಾಗಿದೆ:

  • ೧. ಗೌಳ
  • ೨. ನಾಟಿ
  • ೩. ಆಹೇರಿ
  • ೪. ಗುರ್ಜರಿ
  • ೫. ಮಾಳವಿ
  • ೬. ಸಾರಂಗ
  • ೭. ಫಲಮಂಜರಿ
  • ೮. ಗೌಳಿ
  • ೯. ದೇಶಾಕ್ಷಿ
  • ೧೦. ಮಾರವಿ
  • ೧೧. ದೇಶಿ
  • ೧೨. ಭೈರವಿ
  • ೧೩. ಸಾವೇರಿ
  • ೧೪. ಪೂರ್ವಿ
  • ೧೫. ಕಾಂಭೋಜಿ
  • ೧೬. ಪಾಡಿ
  • ೧೭. ಶಂಕರಾಭರಣ
  • ೧೮. ಮಾಳವ
  • ೧೯. ವರಾಳಿ
  • ೨೦. ಕಲ್ಯಾಣಿ
  • ೨೧. ತೋಡಿ
  • ೨೨. ಮುಖಾರಿ
  • ೨೩. ವಸಂತ
  • ೨೪. ಬೌಳಿ
  • ೨೫. ಧನ್ಯಾಸಿ
  • ೨೬. ಸೌರಾಷ್ಟ್ರ
  • ೨೭. ಗುಂಡಕ್ರಿಯ
  • ೨೮. ರಾಮಕ್ರಿಯ
  • ೨೯. ಮೇಘ
  • ೩೦. ಕುರಂಜಿ
  • ೩೧. ಮಲಹರಿ
  • ೩೨. ಮೇಘರಂಜನಿ

ಹೀಗೆ, ಪುರಂದರ ದಾಸರ ರಚನೆಗಳಿಂದಲೇ, ಅವರ ಕಾಲದ ಹಲವು ಪ್ರಸಿದ್ಧ ರಾಗಗಳನ್ನು ಸಂಶೋಧಕರು ಹೆಕ್ಕಿ ತೆಗೆದಿದ್ದಾರೆ. ಈ ಮೂವತ್ತೆರಡೇ, ಪೂರ್ವಪ್ರಸಿದ್ಧ ಬತ್ತೀಸ ರಾಗಗಳಾಗಿದ್ದಿರಬಹುದು ಎನ್ನುವುದು ಅವರ ಊಹೆ ಮತ್ತು ನಂಬಿಕೆ.

ಸಂಶೋಧನಾಕಾರರ ರಿಪೋರ್ಟ್ ನೋಡಬೇಕಿದ್ದರೆ ಈ ವೆಬ್ ಲಿಂಕ್ ಗೆ

Ref.: For Kannada Version. Click Here

Ref.: For English Version. Click Here