Janana & Marana

service

ಅವರ ಜೀವನದ ಹೆಚ್ಚಿನ ವಿವರಗಳು ನಮಗೆ ಹೀಗೇ ಇದ್ದಿರಬೇಕೆಂದು ತಿಳಿಯುವುದಿಲ್ಲ. ಅವರು ಹುಟ್ಟಿದ ದಿನವೇ ಆಗಲಿ, ಅಥವಾ ಅವರು ವ್ಯಾಸತೀರ್ಥರ ಶಿಷ್ಯರಾಗಿ ಹರಿದಾಸ ದೀಕ್ಷೆಯನ್ನು ತೆಗೆದುಕೊಂಡ ದಿನವೂ ಯಾವುದೆಂದು ಖಡಾಖಂಡಿತವಾಗಿ ಹೇಳಲಾಗದು.

ಪುರಂದರ ದಾಸರ ಜನನ :
  • ಪುರಂದರ ದಾಸರು ಪುರಂದರಗಢದವರಲ್ಲ, ನಮ್ಮ ಕರ್ನಾಟಕದವರು
  • ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರ ಹುಟ್ಟೂರಿನ ಜಿಜ್ಞಾಸೆಗೆ ಕೊನೆಗೂ ತೆರೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಪ್ರಾಂತ್ಯವೇ ದಾಸಶ್ರೇಷ್ಠ ಪುರಂದರ ದಾಸರ ಹುಟ್ಟೂರು ಎಂಬ ಖಚಿತ ವರದಿಯನ್ನು ಅಧ್ಯಯನ ಸಮಿತಿ ಸರಕಾರಕ್ಕೆ ಸಲ್ಲಿಸಿದೆ.
  • ತೀರ್ಥಹಳ್ಳಿಗೆ ಹೆಮ್ಮೆಯ ಗರಿ:
    ಎರಡು ಜ್ಞಾನಪೀಠ ಪ್ರಶಸ್ತಿ (ಕುವೆಂಪು ಮತ್ತು ಯು. ಆರ್‌. ಅನಂತಮೂರ್ತಿ) ಮುಡಿಗೇರಿಸಿಕೊಂಡಿರುವ ತೀರ್ಥಹಳ್ಳಿ ತಾಲೂಕಿಗೆ ಈಗ ಮತ್ತೊಂದು ಹೆಮ್ಮೆಯ ಗರಿ ಸಿಕ್ಕಿದೆ. ಕರ್ನಾಟಕ ಸಂಗೀತ ಪಿತಾಮಹ, ದಾಸಶ್ರೇಷ್ಠ ಪುರಂದರ ದಾಸರು ಇದೇ ತಾಲೂಕಿನಲ್ಲಿ ಜನಿಸಿದವರು ಎಂಬ ಹೆಗ್ಗಳಿಕೆ ಈ ತಾಲೂಕಿನದ್ದು.
  • ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್ ಅನ್ನು ನೋಡಿ :
  • ಅವರ ಹುಟ್ಟೂರಿನ ಬಗ್ಗೆ ಒಂದು ರಿಸರ್ಚ್ ವಿಡಿಯೋ ಲಿಂಕ್:
ಪುರಂದರ ದಾಸರ ಮರಣ : (Ref: https://neelanjana.wordpress.com/tag/haridasa/)
  • ಶ್ರೀ ಪುರಂದರ ದಾಸರು ತಮ್ಮ ಕೊನೆಯ ಕಾಲದಲ್ಲಿ ವಿಜಯನಗರದಲ್ಲಿ ವಾಸವಾಗಿದ್ದು 1564 ರಂದು ಶಾಲಿವಾಹನ ಶಕ ರಕ್ತಾಕ್ಷಿ ಸಂವತ್ಸರ ಪುಷ್ಯ ಬಹುಳ ಅಮವಾಸ್ಯೆ ಭಾನುವಾರ ಶುಭದಿನದಂದು ತಮ್ಮ ಅವತಾರವನ್ನು ಸಮಾಪ್ತಗೊಳಿಸಿದರು. ಇದಕ್ಕೆ ಸರಿಹೊಂದುವ ತಾರೀಖು 02.01.1564
  • ಆದರೆ ಅವರ ಜೀವನದ ಕಡೆಯ ದಿನದ ಬಗ್ಗೆ ಮಾತ್ರ ನಮಗೆ ಖಚಿತವಾದ ಮಾಹಿತಿ ತಿಳಿದುಬರುತ್ತೆ - ಅದು ನಮಗೆ ತಿಳಿಯುವುದು ಪುರಂದರ ದಾಸರ ಮಗ ಮಧ್ವಪತಿದಾಸರ ಒಂದು ರಚನೆಯಲ್ಲಿ.

ಆ ಪದ ಹೀಗಿದೆ:

ತೆರಳಿದರು ಹರಿಪುರಕಿಂದು || ಪಲ್ಲವಿ ||
ಪುರಂದರ ದಾಸ ರಾಯರು ದೀನಬಂಧು || ಅನುಪಲ್ಲವಿ ||

ರಕ್ತಾಕ್ಷಿವತ್ಸರ ಪುಷ್ಯಾಂತ ರವಿವಾರ
ಮುಕ್ತಿಗೈದಿದರು ಕೇಳಿ ಬುಧ ಜನರು || ೧ ||

ವಿರೂಪಾಕ್ಷ ಕ್ಷೇತ್ರದಿ ವಿಠಲನ್ನ ಸನ್ನಿಧಿಯಲ್ಲಿ
ಶರೀರವನಿರಿಸಿ ಅನಾಥರನು ಹರಸಿ || ೨ ||

  • ಈ ರಚನೆಯ ಪಲ್ಲವಿಯನ್ನು ನೋಡಿದಾಗ, ಅದು ಪುರಂದರ ದಾಸರ ಮರಣದ ದಿನವೇ ರಚಿಸಿರಬೇಕೆಂದು ತೋರುತ್ತೆ. ಮೊದಲನೇ ಚರಣ ಅಂದು ಯಾವ ದಿನವಾಗಿತ್ತೆನ್ನುವುದನ್ನೂ, ಎರಡನೇ ಚರಣವು ಇದು ನಡೆದದ್ದು ಹಂಪೆಯ ವಿಜಯ ವಿಠಲನ ಸನ್ನಿಧಿಯಲ್ಲಿ ಎನ್ನುವುದನ್ನೂ ತಿಳಿಸುತ್ತೆ. ಹಾಗಾಗಿ, ಈ ಘಟನೆ ಹಂಪೆಯ ವಿಜಯ ವಿಠಲನ ಗುಡಿಯ ಬಳಿ, ತುಂಗಭದ್ರೆಯ ದಡದಲ್ಲಿರುವ ಪುರಂದರ ದಾಸ ಮಂಟಪದಲ್ಲೇ ಇರಬೇಕು ಎಂದೂ ಎನಿಸುತ್ತೆ.
  • ಶ್ರೀ ವಿಜಯದಾಸರು – ಗುರು ಪುರಂದರ ದಾಸರೇ ನಿಮ್ಮ ಚರಣಕಮಲವ ನಂಬಿದೆ, ಗರುವ ರಹಿತರ ಮಾಡಿ ಎಮ್ಮನು ಪೊರೆವ ಭಾರವು ನಿಮ್ಮದೆ – ಎಂದು ಬೇಡಿದ್ದಾರೆ. ನಾವೂ ದಾಸ ಶ್ರೇಷ್ಠರಾದ ದಯಾನಿಧಿಗಳನ್ನು ಸ್ಮರಿಸೋಣ.
service

Indian P & T Department, in memory of Purandara Dasa on his 400 th Death Anniversary, issued a commemorative postal stamp on Jan 14, 1964..