- ಪುರಂದರ ದಾಸರು ತಮ್ಮ ಸಂಪತ್ತಿನ ಮೇಲೆ ವಿರಕ್ತ ರಾಗಿ ಎಲ್ಲಾ ಸಮಸ್ತ ಆಸ್ತಿಯನ್ನು ದಾನ ಮಾಡಿ
ಕುಟುಂಬ ಸಮೇತರಾಗಿ ಪಂಢರಾಪುರಕ್ಕೆ ಬರುತ್ತಾರೆ. ಪಾಂಡುರಂಗನ ಬಳಿ ಬಂದಾಗ ಸ್ವಪ್ನದಲ್ಲಿ ವಿಠ್ಠಲ
ಬಂದು ವಿಜಯನಗರದಲ್ಲಿ ಇರುವ ಶ್ರೀ ವ್ಯಾಸರಾಯರು ನಿನಗೆ ಗುರುಗಳು. ಅವರ ಬಳಿ ಅಂಕಿತ ತೆಗೆದುಕೊಂಡು
ನನ್ನ ದಾಸನಾಗು ಎಂದು ಸೂಚಿಸುತ್ತಾರೆ.
- ವಿಜಯನಗರಕ್ಕೆ ಬಂದು ಗುರು ವ್ಯಾಸರಾಯರಿಂದ *ಪುರಂದರ ವಿಠ್ಠಲ* ಎಂಬ ಅಂಕಿತ ತೆಗೆದುಕೊಂಡು ಅನೇಕ ಕೃತಿಗಳನ್ನು ರಚಿಸಿದ್ದಾರೆ.
- ನಾರದರೇ ಪುರಂದರ ದಾಸರಾಗಿ ಅವತರಿಸಿ ಹರಿ ನಾಮದ ಸವಿಯನ್ನು ಮತ್ತು ಮಹಿಮೆಯನ್ನು ಶಾಸ್ತ್ರೀಯ ಸಂಗೀತ, ಹಾಡು, ಭಜನೆ, ಉಗಾಭೋಗಾ, ಸುಳಾದಿಗಳೆಂಬ ರುಚಿಯಾದ ಫಲಗಳಲ್ಲಿ ನಮಗೆ ದೊರಕುವಂತೆ ಮಾಡಿದ ಮಹಿಮರು.
- ಒಟ್ಟು 4,75,000 ಕೃತಿಗಳನ್ನು ದಾಸರು ರಚಿಸಿದ್ದಾರೆಂದು ಕೆಲವೆಡೆ ಉಲ್ಲೇಖಿಸಿದ್ದಾರೆ.
- ಪುರಂದರ ದಾಸರು ಐದು (5) ಲಕ್ಷ ಕೃತಿಗಳನ್ನು ರಚಿಸಬೇಕೆಂಬ ಸಂಕಲ್ಪ ಹೊಂದಿದ್ದರೆಂಬುದು ಹಲವು ಹರಿದಾಸ ಸಾಹಿತ್ಯ ಸಂಶೋಧಕರ ಅಭಿಪ್ರಾಯ. ಅವರ ಮರಣ ಸಮೀಪಿಸಿದಾಗ ಉಳಿದ 25,000 ಕೃತಿಗಳನ್ನು ತಮ್ಮ ಮಕ್ಕಳಾದ ಗುರು ಮಧ್ವಪತಿಗೆ ಮುಂದಿನ ಜನ್ಮದಲ್ಲಿ ರಚಿಸಿ ಪರಿಪೂರ್ಣ ಗೊಳಿಸಲು ಹೇಳುತ್ತಾರೆ ಎಂದು ಕೆಲವೆಡೆ ಉಲ್ಲೇಖಿಸಿದ್ದಾರೆ ಎನ್ನುವುದು ಕೆಲವು ಸಂಶೋಧಕರ ವಾದ.
- ಅವರೇ ಮುಂದೆ ಶ್ರೀ ವಿಜಯದಾಸರಾಗಿ ಅವತರಿಸಿ ಪುರಂದರ ದಾಸರ ಸಂಕಲ್ಪವನ್ನು ಸಂಪೂರ್ಣಗೊಳಿಸುತ್ತಾರೆ.