ಪುರಂದರ ದಾಸರು ಕರ್ನಾಟಕ ಸಂಗೀತ ಪಿತಾಮಹರು ಮತ್ತು ಲೋಕ ಪ್ರಿಯರು. ಧರೆಗಿಳಿದು ಬಂದ ನಾರದ ಮುನಿಗಳು. ಅವರು ವೇದ ಉಪನಿಷತ್ತುಗಳ, ಪುರಾಣಗಳ, ಭಗವದ್ಗೀತೆಯ ಸಾರವನ್ನು ಸರಳವಾಗಿ, ಸುಲಭವಾಗಿ ಎಲ್ಲರಿಗೂ ಅರ್ಥವಾಗುವಂತೆ ತಮ್ಮ ಸಾಹಿತ್ಯ ಸಂಗೀತದಲ್ಲಿ ತಿಳಿಸಿದ್ದಾರೆ. ಅವುಗಳು ಇವತ್ತಿಗೂ ತುಂಬಾ ಜನಪ್ರಿಯ ಮತ್ತು ಎಲ್ಲರ ಅಚ್ಚುಮೆಚ್ಚು.
ಅವರ ರಚನೆಗಳು 4,75,000 ದಷ್ಟು ಇವೆಯೆಂದು ಕೆಲವೆಡೆ ಉಲ್ಲೇಖಿಸಿದ್ದಾರೆ. ಅದರಲ್ಲಿ ಇದುವರೆಗೂ ದೊರಕಿರುವುದು ಕೆಲವು ಸಾವಿರ ಕೃತಿಗಳು ಮಾತ್ರ ಎಂದು ನಂಬಿಕೆ. ಇದಕ್ಕೆ ಎಲ್ಲೂ ಸರಿಯಾದ ಮಾಹಿತಿಯಿಲ್ಲ.
ದೊರಕಿರುವ ಎಲ್ಲಾ ಕೃತಿಗಳನ್ನು ಎಲ್ಲೆಡೆಯಿಂದ ಸಂಗ್ರಹಿಸಿ, ಸಾಹಿತ್ಯ, ಸಂಗೀತ ಮತ್ತು ವ್ಯಾಖ್ಯಾನಗಳನ್ನು ಸಮಗ್ರವಾಗಿ ಒಂದೆಡೆ ದೊರಕಿಸಿಕೊಡುವುದು ನಮ್ಮ ಮೂಲ ಉದ್ದೇಶ. ಈ ವೆಬ್ಸೈಟ್ ಮುಖಾಂತರ ಎಲ್ಲಾ ಆಸಕ್ತರಿಗೂ ಮತ್ತು ಸಂಗೀತದ ಅಭಿಮಾನಿಗಳಿಗೂ ಇದರಿಂದ ಉಪಯೋಗವಾಗಲಿ ಎನ್ನುವುದು ನಮ್ಮ ಅಭಿಲಾಷೆ ಮತ್ತು ಕೊಡುಗೆ.
Purandara Dasa is known as the father of Carnatic Music due to his immense contributions. It is believed that he was an incarnation of Saint Narada Muni and presented gist of vedas, upanishads, puranas and bhagavadgeethe in very simple musical language which was liked by all persons and is very popular even today.
It is mentioned that he composed about 4,75,000 kritis in very simple kannada with musical intonations. Out of this only few thousands are found till date.
This website attempts to bring together as many lyrics and songs as possible for the benefit of the masses.
WHAT WE HAVE FOR YOU
Aasheervachanas