ಪುರಂದರ ಸಾಹಿತ್ಯ ಮತ್ತು ಸಂಗೀತದಲ್ಲಿ ನಮಗೆ ಇದುವರೆಗೂ ಸಿಕ್ಕಿರುವಂತಹ ಮಹಾನ್ ಮುತ್ತು ರತ್ನಗಳನ್ನು ಸಂಗ್ರಹಿಸಿ, ಸಮಗ್ರವಾಗಿ ತಮ್ಮೆಲ್ಲರಿಗೂ ದೊರಕುವಂತೆ ಮಾಡಿರುವ ಒಂದು ಪ್ರಯತ್ನವಿದು.
ಈ ಸಮಗ್ರ, ಸವಿಸ್ತಾರವಾದ ಸಂಗ್ರಹ ಎಲ್ಲರಿಗೂ ಸುಲಭವಾಗಿ ದೊರಕಲಿ ಎನ್ನುವುದೇ ನಮ್ಮ ಮುಖ್ಯ ಉದ್ದೇಶ
ಇದು ವಿವಿಧ ಮೂಲಗಳಿಂದ, ಪುಸ್ತಕಗಳಿಂದ ಮತ್ತು ವೆಬ್ಸೈಟ್ಗಳಿಂದ ಮಾಡಿದ ಸಂಗ್ರಹ ಮಾತ್ರ. ಪುರಂದರ ದಾಸರ ಮೂಲ ಕೃತಿ / ನಕಲಿ ಕೃತಿ ಎಂದು ವಿಂಗಡಿಸವ ಕಾರ್ಯವನ್ನು ಮಾಡಿಲ್ಲ.
ಕೃತಿಗಳಲ್ಲಿ ಕೆಲವು ಪದಗಳ ವ್ಯತ್ಯಾಸಗಳು ಇವೆ. ನಮಗೆ ಹೇಗೆ ಸಿಕ್ಕಿದೆಯೋ ಹಾಗೆಯೇ ಉಲ್ಲೇಖಿಸಿದ್ದೇವೆ. ಪದಗಳ ನ್ಯೂನ್ಯತೆಗಳನ್ನು ನಾವು ಸರಿ ಮಾಡುವ ಕೆಲಸ ಕೈಗೊಂಡಿಲ್ಲ. ಇದು ಸಂಶೋಧನೆ ಮಾಡುವ ಒಂದು ಮಹತ್ತರ ಕಾರ್ಯವೆಂದು ನಮ್ಮ ಅಭಿಪ್ರಾಯ.
ಕೃತಿಗಳಲ್ಲಿರುವ ಸಾಲುಗಳಲ್ಲಿಯೂ ಪದಗಳಲ್ಲಿಯೂ ಕೆಲವು ಕಡೆ ತಪ್ಪುಗಳು ಇವೆಯೆಂದು ನಮಗೆ ಅನಿಸಿದೆ.ಆದರೆ ಅವುಗಳನ್ನು ಹೇಗೆ ದೊರಕಿದೆಯೋ ಹಾಗೆಯೇ ಇಲ್ಲಿ ತೆಗೆದುಕೊಂಡಿದ್ದೇವೆ.
ಇನ್ನು ಮುಂದೆ ದೊರಕುವ, ಇದುವರೆಗೂ ದೊರಕಿರುವ ಪುರಂದರ ಕೃತಿಗಳು ಈ ನಮ್ಮ ವೆಬ್ಸೈಟ್ ನಲ್ಲಿ ಸಮಗ್ರವಾಗಿ ನಿಮ್ಮೆಲ್ಲರಿಗೆ ತಲುಪಿಸುವುದೇ ನಮ್ಮ ಉದ್ದೇಶ. ಸಾಹಿತ್ಯ - ಸಂಗೀತ - ವ್ಯಾಖ್ಯಾನ - ಪ್ರವಚನ - ಅರ್ಥ ಸಹಿತ ಎಲ್ಲರಿಗೂ ಉಪಯೋಗವಾಗಲಿ ಎನ್ನುವುದು.
ಸಂಗೀತಗಾರರ ಹಾಡಿಗೂ ಸಾಹಿತ್ಯದಲ್ಲಿ ನಮೂದಿಸಿರುವ ರಾಗ ತಾಳಗಳಿಗೂ ವ್ಯತ್ಯಾಸಗಳಿರಬಹುದು. ಅದನ್ನು ಇಲ್ಲಿ ನಾವು ಸರಿಪಡಿಸಿಲ್ಲ.
ಈ ನಮ್ಮ ಪ್ರಯತ್ನದ ಮುಖಾಂತರ ನಿರಂತರವಾಗಿ ಪ್ರತಿ ದಿನವೂ ಪ್ರತಿ ವರ್ಷವೂ ಸದಾ ಕಾಲವು ಪುರಂದರ ದಾಸರ ಸ್ಮರಣೆ ಮಾಡುತ್ತಾ ಭಕ್ತಿ ಮಾರ್ಗದಲ್ಲಿದ್ದು ಉತ್ತಮ ಜೀವನ ನಡೆಸಲು ನಮ್ಮೆಲ್ಲರನ್ನೂ ಸದಾ ಕಾಲ ಪ್ರೇರೇಪಿಸಲಿ ಎಂದು ದೇವರಲ್ಲಿ ಈ ಮೂಲಕ ಪ್ರಾರ್ಥಿಸುತ್ತೇವೆ
ಇದು ಸಂಶೋಧನೆ ಮಾಡುವ ಎಲ್ಲಾ ಮಹನೀಯರಿಗೆ ಸಹಾಯವಾಗಲಿ ಮತ್ತು ನಮ್ಮ ಹೆಮ್ಮೆಯ ಪುರಂದರ ಸಾಹಿತ್ಯ ಬೆಳೆಯಲಿ ಎನ್ನುವುದೂ ನಮ್ಮ ಆಶಯ.